ಡಬ್ಬಿಂಗ ಮುಗಿಸಿದ ಸವಾರಿ ೨ ಗೆ ಪುನೀತ್ ಹಾಡು
Posted date: 06 Sun, Apr 2014 – 09:38:48 AM

ಜೇಕಬ್ ಫಿಲಂಸ್ ಲಾಂಛನದಲ್ಲಿ ಕಥೆ-ಚಿತ್ರಕಥೆ-ನಿರ್ಮಾಣದ ಜೊತೆಗೆ ನಿರ್ದೇಶನ ಮಾಡುತ್ತಿರುವ ಜೇಕಬ್ ವರ್ಗೀಸ್ ರವರ ಸವಾರಿ ೨ ಚಿತ್ರಕ್ಕೆ  ಆಕಾಶ್ ಸ್ಟುಡಿಯೋವಿನಲ್ಲಿ ಡಬ್ಬಿಂಗ್ ಕಾರ್ಯ ಪೂರ್ಣಗೊಂಡಿದ್ದು  ಇದೇಸಂದರ್ಭದಲ್ಲಿ  ನಟ ಪುನೀತ್ ರಾಜ್‌ಕುಮಾರ್ ಪೀಪೀ ಸಾಂಗ್ ಒಂದನ್ನು ಹಾಡಿದ್ದಾರೆ. ಮೋಟುಬೀಡಿ ಹಚ್ಕೊಂಡು, ಲುಂಗಿ ಟೈಟ್ ಮಾಡ್ಕೊಂಡು ನಾಲ್ಕು ಸ್ಟೆಪ್ ಹಾಕ್ಕೊಂಡು ಒಂಟೈತೆ ಸವಾರಿ  ಎಂಬ ಹಾಡಿಗೆ ದಾವಣಗೆರೆಯ ಮಂಜು ದೊಡ್ಮನಿ, ಬೆಂಗಳೂರಿನ ಅನುಪಮ, ಈ ಗೀತೆ ರಚಿಸಿದ್ದಾರೆ, ಈ ಸಂದರ್ಭದಲ್ಲಿ  ರಾಘವೇಂದ್ರ ರಾಜ್‌ಕುಮಾರ್  ಅತಿಥಿಯಾಗಿ ಆಗಮಿಸಿದ್ದರು. ಈ ಚಿತ್ರದ ಸಂಭಾಷಣೆ-ಮಂಜು ಮಾಂಡವ್ಯ, ಛಾಯಾಗ್ರಹಣ-ಶಶಿಕುಮಾರ್, ಸಂಗೀತ-ಮಣಿಕಾಂತ್ ಕದ್ರಿ, ಸಾಹಸ-ಡಿಪರೆಂಟ್ ಡ್ಯಾನಿ, ನೃತ್ಯ-ರಘು-ಅರವಿಂದ,  ಕಲೆ-ಕುಮಾರ್, ಕೋ-ಡೈರೆಕ್ಟರ್-ನಂದೀಶ್, ನಿರ್ವಹಣೆ-ಸುಂದರರಾಜ್-ಗಗನಮೂರ್ತಿ, ಸಾಹಿತ್ಯ-ಜಯಂತ್ ಕಾಯ್ಕಿಣಿ, ಕವಿರಾಜ್, ಡಾ||ವಿ. ನಾಗೇಂದ್ರ ಪ್ರಸಾದ್,  ಶ್ರೀನಗರ ಕಿಟ್ಟಿ, ಶೃತಿ ಹರಿಹರನ್, ಕರಣ್ ರಾವ್, ಅಬ್ಬಾಸ್, ಮಧುರಿಮಾ ಬ್ಯಾನರ್ಜಿ, ಗಿರೀಶ್ ಕಾರ್ನಾಡ್, ಸಾಧುಕೋಕಿಲ, ಅವಿನಾಶ್, ಶರತ್ ಲೋಹಿತಾಶ್ವ ಮುಂತಾದವರಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed